ಅರಂತೋಡು: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ ಪೂರಕವಾಗಿದೆ ➤ ಯೋಗ ಶಿಕ್ಷಕ ರಾಮಕೃಷ್ಣ ಭಟ್

(ನ್ಯೂಸ್ ಕಡಬ) newskadaba.com ಅರಂತೋಡು, ಜೂ. 24. ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಂಘದ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಯೋಗ ಶಿಕ್ಷಕ ಶ್ರೀ ರಾಮಕೃಷ್ಣ ಭಟ್ ಸುಳ್ಯ ಅವರು ಗಿಡಕ್ಕೆ ನೀರು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ ಪೂರಕವಾಗಿದೆ. ವಿದ್ಯಾರ್ಥಿಗಳು ಯೋಗದ ಮಹತ್ತ್ವ ತಿಳಿದು ರೂಢಿಸಿಕೊಳ್ಳಲು ಕರೆ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ರಮೇಶ್ ವಹಿಸಿದ್ದರು. ಇತಿಹಾಸ ಉಪನ್ಯಾಸಕ ಶ್ರೀ ಮೋಹನ್ ಚಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಶ್ರೀ ಗೌರಿಶಂಕರ ವಂದಿಸಿದರು. ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ ಲಿಂಗಪ್ಪ ಎಂ, ದೈಹಿಕ ಶಿಕ್ಷಣ ಉಪನ್ಯಾಸಕಿ ಶ್ರೀಮತಿ ಶಾಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸುರೇಶ್ ವಾಗ್ಲೆ, ಶ್ರೀ ಪದ್ಮಕುಮಾರ್, ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ವಿದ್ಯಾಶಾಲಿನಿ ಮತ್ತು ಇತರ ಉಪನ್ಯಾಸಕರು ಸಿಬ್ಬಂದಿ ವರ್ಗ ಸಹಕರಿಸಿದರು.

Also Read  ಗೋಳಿತೊಟ್ಟು: ಲಾರಿ ಚಾಲಕನ ಕೈಕಾಲು ಕಟ್ಟಿ ಹಾಕಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು ➤ ಉಪ್ಪಿನಂಗಡಿ ಪೊಲೀಸರಲ್ಲಿ ಸತ್ಯ ಬಾಯ್ಬಿಟ್ಟ ಆರೋಪಿ ಲಾರಿ ಮಾಲೀಕ

error: Content is protected !!
Scroll to Top