ಬೆಳ್ಳಾರೆ: ಮೊಬೈಲ್ ಶೋರೂಂನಲ್ಲಿ ರೆಡ್ಮಿ ಮೊಬೈಲ್ ಸ್ಪೋಟ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 20. ಇಲ್ಲಿನ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ರಿಪೇರಿಗೆಂದು ಬಂದಿದ್ದ ‘ರೆಡ್ಮಿ ಆಂಡ್ರಾಯ್ಡ್’ ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡು, ಮೊಬೈಲ್ ಹೊತ್ತಿ ಉರಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಮೊಬೈಲ್ಸ್ ಶಾಪ್ ಗೆ ಮಹಿಳೆಯೋರ್ವರು ಬಂದು ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆಂದು ರೆಡ್ಮಿ ಮೊಬೈಲ್ ನೀಡಿದ್ದರು. ಇದು ಆಕಸ್ಮಿಕವಾಗಿ ಸ್ಪೋಟಗೊಂಡು ಹೊತ್ತಿ ಉರಿದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಗಡಿ ಮಾಲಕ ರೆಡ್ಮಿ ಮೊಬೈಲ್ ನ ಬ್ಯಾಟರಿ ಸಮಸ್ಯೆಯಿಂದಾಗಿ ಮೊಬೈಲ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

Also Read  ಜ.30 ಹಾಗೂ 31 ರಂದು ಮಾನ್ಯ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ದ.ಕ ಜಿಲ್ಲಾ ಪ್ರವಾಸ

error: Content is protected !!
Scroll to Top