ಕಲುಷಿತ ನೀರು ಕುಡಿದು ನೂರಾರು ಮಕ್ಕಳು ಅಸ್ವಸ್ಥ- ಆಸ್ಪತ್ರೆಗೆ ದಾಖಲು ➤ SDPI ಖಂಡನೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 15. ಚಿಕ್ಕಮಗಳೂರು ನಗರದ ತಮಿಳು ಕಾಲೊನಿ ವಾರ್ಡ್ ನಂ 22 – 23 ರಲ್ಲಿ ಕಲುಷಿತಗೊಂಡ ನೀರು ಕುಡಿದು ಅಸ್ವಸ್ಥಗೊಂಡ 80 ಕ್ಕೂ ಹೆಚ್ಚು ಜನ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರದೇಶದಲ್ಲಿ ಯುಜಿಡಿ ನೀರು ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಒಟ್ಟಿಗೆ ಇದ್ದು ಬಹಳ ತಗ್ಗು ಪ್ರದೇಶ ಇರುವುದರಿಂದ ಕುಡಿಯುವ ನೀರಿನ ಪೈಪ್ ಗೆ ಯುಜಿಡಿ ಕಲುಷಿತಗೊಂಡ ನೀರು ಮಿಶ್ರಣವಾಗಿ ಅದರಲ್ಲಿ ಸಣ್ಣ ಸಣ್ಣ ಹುಳಗಳು ಕಂಡುಬಂದಿದ್ದವು.

 


ಇದೇ ವಿಷಯಕ್ಕೆ ಸಂಬಂದಿಸಿದಂತೆ ಎರಡು ತಿಂಗಳ ಹಿಂದೆ ನಗರ ಸಭೆ ಸದಸ್ಯರಿಗೆ ಮತ್ತು ಕಮೀಷನರ್ ರವರಿಗೆ ಎಸ್ಡಿಪಿಐ ದೂರು ನೀಡಿದ್ದು, ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಈ ಅನಾಹುತ ಸಂಭವಿಸಿದೆ‌. ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣವೆಂದು ಎಸ್ಡಿಪಿಐ ಅರೋಪಿಸುತ್ತಿದೆ.

Also Read  ಪೆರ್ಲ: ಓಮ್ನಿ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಬೈಕ್ ಸವಾರನಿಗೆ ಗಾಯ

ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿಯವರು ಎಲ್ಲಾ ವಿಚಾರದಲ್ಲೂ ಹಿಂದೂ ಮುಸ್ಲಿಂ ನಡುವೆ ಕೋಮುವಾದದ ಬಣ್ಣ ನೀಡಿ ಇಡೀ ಕರ್ನಾಟಕ್ಕೆ ಬೆಂಕಿ ಇಡುವುದರಲ್ಲಿ‌ ತಲ್ಲೀಣರಾಗಿದ್ದಾರೆ. ಆದರೆ ತಮ್ಮದೇ ಕ್ಷೇತ್ರದಲ್ಲಿ ಜನ ಸಾಯುತ್ತಿದ್ದರೂ ನೋಡಲು ಸಮಯವಿಲ್ಲ. ಸೌಜನ್ಯಕ್ಕೂ ಒಂದು ಬಾರಿ ಭೇಟಿ ನೀಡಿ ವಿಚಾರಿಸಲು ಸಮಯ ಸಿಗದಿರುವುದು ಜಿಲ್ಲೆಯ ದುರಾದೃಷ್ಟ. ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಚಿಕ್ಕಮಗಳೂರಿನ ನಗರಸಭೆ, ಹಾಗೂ ಶಾಸಕರ ನಡತೆಯನ್ನು SDPI ತೀವ್ರವಾಗಿ ಖಂಡಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ನಗರ ಸಭಾ ಅಯುಕ್ತರು, ಸದಸ್ಯರು ಮತ್ತು ಶಾಸಕರು ಆದಷ್ಟು ಬೇಗ ಗಮನಹರಿಸಿ ಅಸ್ವಸ್ಥವಾಗಿರುವ ಮಕ್ಕಳ ಚಿಕಿತ್ಸಾ ಖರ್ಚು ಭರಿಸಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗು ನಗರದ ನೀರಿನ ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಪರಿಹರಿಸಬೇಕು. ವಿಷಯಕ್ಕೆ ಸಂಬಂದಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ SDPI ಪಕ್ಷದ ವತಿಯಿಂದ ದಲಿತ ಸಂಘಟನೆಗಳನ್ನು ಹಾಗೂ ಜನಪರ ಚಿಂತಕರನ್ನು ಒಟ್ಟುಗೂಡಿಸಿ ನಗರಸಭೆಗೆ ಮುತ್ತಿಗೆ ಹಾಕಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Also Read  ➤ ನಕಲಿ ‌ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ!

error: Content is protected !!
Scroll to Top