ಅಮಾನ್ಯಗೊಂಡ 500 ಹಾಗೂ 1000 ಮೌಲ್ಯದ ನೋಟು ಸಾಗಾಟ ➤ ನಾಲ್ವರು ಅಂದರ್



(ನ್ಯೂಸ್ ಕಡಬ) Newskadaba.com ಮಂಗಳೂರು, ನ. 19. ಅಮಾನ್ಯಗೊಂಡ 1.92ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸಹಿತ ನಾಲ್ವರು ಆರೋಪಿಗಳು ಹಾಗೂ ಕಾರೊಂದನ್ನು ವಶಪಡಿಸಿಕೊಂಡ ಘಟನೆ ಮಂಗಳೂರಿನಿಂದ ವರದಿಯಾಗಿದೆ.







ಬಂಧಿತರನ್ನು ಜುಬೈರ್, ಹಮ್ಮಬ್ಬ, ದೀಪಕ್ ಹಾಗೂ ನಾಸಿರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಚಿತ್ರದುರ್ಗ ಹಾಗೂ ಶಿವಮೊಗ್ಗ ಕಡೆಯಿಂದ ತಂದಿದ್ದ 1000 ಹಾಗೂ 500 ಮುಖಬೆಲೆಯ ಒಂದು ಕೋಟಿ ತೊಂಬತ್ತೆರಡು ಲಕ್ಷದ ಐವತ್ತು ಸಾವಿರ ಮೌಲ್ಯದ ನೋಟುಗಳು ಹಾಗೂ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top