ಮಂಗಳೂರು: ವಿವಿ ಕಾಲೇಜಿನಲ್ಲಿ ಹೊಡೆದಾಟ ಪ್ರಕರಣ ➤ ಆರು ವಿದ್ಯಾರ್ಥಿಗಳ ವಿರುದ್ದ ಎಫ್ಐಆರ್ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 11. ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಮಂದಿಯ ವಿರುದ್ಧ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವಿದ್ಯಾರ್ಥಿಗಳಾದ ಮರ್ಝೂಕ್, ಅಬೂಬಕ್ಕರ್ ಸಿದ್ದೀಕ್, ಮುಹಮ್ಮದ್ ಅಪಾಝ್, ಪ್ರಜನ್ ಶೆಟ್ಟಿ, ಸ್ವಸ್ತಿಕ್ ಹಾಗೂ ಗುರುಕಿರಣ್ ಎಂಬವರ ಮೇಲೆ ಎಫ್ಐಆರ್ ದಾಖಲಾಗಿದೆ. ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ ವಿಷಯಕ್ಕೆ ಸಂಬಂಧಿಸಿ ಶುಕ್ರವಾರದಂದು ಮಧ್ಯಾಹ್ನ ಊಟದ ವೇಳೆ ವಿದ್ಯಾರ್ಥಿಗಳ ಎರಡೂ ತಂಡದ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿತ್ತು. ಇವರ ಪೈಕಿ ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೇ ಘಟನೆಗೆ ಸಂಬಂಧಿಸಿ ಶುಕ್ರವಾರ ಸಂಜೆ ಸಮಾನ ಮನಸ್ಕ ಸಂಘಟನೆಯ ವಿದ್ಯಾರ್ಥಿಗಳು ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿ ಗೇಟು ಬಳಿ ಪ್ರತಿಭಟನೆ ನಡೆಸಿದ್ದರು.

Also Read  ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ಫಲಿತಾಂಶ ಪ್ರಕಟ ➤ ಮನ್ಶರ್ ಕಾಲೇಜು ವಿದ್ಯಾರ್ಥಿನಿಯರ ವಿಶಿಷ್ಟ ಸಾಧನೆ

 

error: Content is protected !!
Scroll to Top