ಮಂಗಳೂರು: ರಾಜ್ಯದ ಮೊದಲ ಕತ್ತೆ ಸಾಕಣೆ ಮತ್ತು ಮಾದರಿ ತರಬೇತಿ ಕೇಂದ್ರ ಆರಂಭ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 11. ಬಂಟ್ವಾಳ ಮತ್ತು ಉಳ್ಳಾಲ ತಾಲೂಕುಗಳ ಮಧ್ಯೆ ಇರುವ ಇರಾ ಎಂಬಲ್ಲಿ ದೇಶದ ಎರಡನೇ ಹಾಗೂ ರಾಜ್ಯದ ಪ್ರಥಮ ಕತ್ತೆ ಸಾಕಣೆ ಮತ್ತು ಮಾದರಿ ತರಬೇತಿ ಕೇಂದ್ರವು, ಐಸಿರಿ ಫಾರ್ಮ್ಸ್​ ಅವರ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಅನುಷ್ಠಾನಗೊಳ್ಳಲಿದೆ.


ರಾಮನಗರ ಮೂಲದ ಇಂಜಿನಿಯರ್ ಶ್ರೀನಿವಾಸ ಗೌಡ ಅವರ ಮಾಲೀಕತ್ವದಲ್ಲಿ ಇದರ ಕಾರ್ಯಾಚರಣೆ ನಡೆಸಲಿದೆ. ಇಲ್ಲಿ ಪೌಷ್ಟಿಕಾಂಶಯುಕ್ತ ಕತ್ತೆ ಹಾಲು ಉತ್ಪಾದನೆ ಮಾಡಲಾಗುತ್ತದೆ. ಅಲ್ಲದೇ ಕತ್ತೆ ಹಾಲು ಪೌಷ್ಟಿಕಾಂಶದ ಜತೆಗೆ ಬಹಳ ದುಬಾರಿಯೂ ಹೌದು. ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಈಗಾಗಲೇ ಈ ತರಬೇತಿ ಕೇಂದ್ರದಲ್ಲಿ 20 ಕತ್ತೆಗಳಿವೆ ಎಂಬುವುದು ತಿಳಿದು ಬಂದಿದೆ.

Also Read  ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಎಬಿವಿಪಿ ಪ್ರತಿಭಟನೆ

error: Content is protected !!
Scroll to Top