ಕಡಬ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನ ➤ ಸ್ಥಳೀಯರ ಸಹಕಾರದೊಂದಿಗೆ ಬಾವಿಯಿಂದ ಮೇಲಕ್ಕೆತ್ತಿದ ಅಗ್ನಿಶಾಮಕ ದಳ

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಬಾವಿಗೆ ಬಿದ್ದ ದನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಮೇಲಕ್ಕೆತ್ತಿ ಬದುಕಿಸಿದ ಘಟನೆ ಕಡಬ ಸಮೀಪದ ಮರ್ಧಾಳ ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಮರ್ಧಾಳ ಶಿವಾಜಿನಗರ ನಿವಾಸಿ ಹೈದರ್ ಕೊಹಿನೂರ್ ಎಂಬವರ ಮನೆ ಸಮೀಪದ ಬಾವಿಗೆ ಖತೀಜಮ್ಮ ಎಂಬವರ ದನ ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ದನವನ್ನು ಮೇಲೆತ್ತಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಿದ್ದಾರೆ‌.

Also Read  ``ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN)”

 

 

error: Content is protected !!
Scroll to Top