ನಾಲ್ಕು ಮಕ್ಕಳಿಗೆ ಜನ್ಮ‌ ನೀಡಿದ ಮಹಿಳೆ ➤ ಮಲೆನಾಡಿನಲ್ಲೊಂದು ಅಚ್ಚರಿಯ ಘಟನೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಮೇ.23. ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಚ್ಚರಿಯ ಘಟನೆಯೊಂದು ಸೋಮವಾರದಂದು ಶಿವಮೊಗ್ಗದಲ್ಲಿ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಭದ್ರಾವತಿ ಮೂಲದ ಮಹಿಳೆ ಅಲ್ಮಾಹ್ ಬಾನು ಅವರಿಗೆ ಸೋಮವಾರ ಬೆಳಗ್ಗೆ ಹೆರಿಗೆಯಾಗಿದ್ದು, ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಾಗಿದ್ದು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ನಾಲ್ಕು ಮಕ್ಕಳಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಲ್ವರೂ ಕ್ರಮವಾಗಿ 1.1, 1.2, 1.3 ಹಾಗೂ 1.8 ಕೆ.ಜಿ. ತೂಕ ಹೊಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 

Scroll to Top