ಇನ್ಮುಂದೆ ಕಡಬ ಪೊಲೀಸ್ ಠಾಣೆಯಲ್ಲಿ ಇಬ್ಬರು ಸಬ್ ಇನ್ಸ್‌ಪೆಕ್ಟರ್ ಗಳು ➤ ತನಿಖಾ ವಿಭಾಗದ ಎಸ್ಐ ಆಗಿ ಶ್ರೀಕಾಂತ್ ರಾಥೋಡ್ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇದುವರೆಗೆ ಖಾಲಿಯಾಗಿದ್ದ ತನಿಖಾ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಇದೇ ಮೊದಲ ಬಾರಿ ನೇಮಕಾತಿ ಮಾಡಲಾಗಿದ್ದು, ನೂತನ ಎಸ್ಐ ಆಗಿ ಶ್ರೀಕಾಂತ್ ರಾಥೋಡ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮೂಲತಃ ಬಿಜಾಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು ಧಾರವಾಡ ವಿವಿಯಿಂದ ಪದವಿ ಶಿಕ್ಷಣ ಪಡೆದು ಡಿಇಡಿ ಶಿಕ್ಷಣವನ್ನೂ ಪೂರೈಸಿ ತದ ನಂತರ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತದನಂತರ 2019-20 ಬ್ಯಾಚ್ ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಗೊಂಡು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರೊಬೇಷನರಿ ಅವಧಿ ಪೂರೈಸಿ ಇದೀಗ ಕಡಬ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈಗಾಗಲೇ ಕಾನೂನು ಸುವ್ಯವಸ್ಥೆ ಸಬ್ ಇನ್ಸ್‌ಪೆಕ್ಟರ್ ಆಗಿ ಆಂಜನೇಯ ರೆಡ್ಡಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Also Read  ಕಡಬ ಸಮೀಪದ ಪಂಜ ಸೇರಿದಂತೆ ಸುಳ್ಯದ ಹಲವೆಡೆ ಮತ್ತೆ ಭೂಕಂಪನ ➤ ಭಯಭೀತರಾದ ಜನತೆ

 

 

error: Content is protected !!
Scroll to Top