ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ➤ ಕೊಂಬಾರಿನಲ್ಲಿ ಧರೆಗುರುಳಿದ ಬೃಹತ್ ಮರ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬ ಪರಿಸರದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಕೊಂಬಾರಿನಲ್ಲಿ ಮರ ಬಿದ್ದು, ವಿದ್ಯುತ್ ತಂತಿಗೆ ಹಾನಿಯಾಗಿದೆ.

ಕಡಬ, ಆಲಂಕಾರು, ನೆಟ್ಟಣ, ಬಿಳಿನೆಲೆ, ಇಚಿಲಂಪಾಡಿ ಭಾಗಗಳಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಸುಂಕದಕಟ್ಟೆ – ಕೊಂಬಾರು ಸಂಪರ್ಕ ರಸ್ತೆಯ ಮಂಡೆಕರ ಎಂಬಲ್ಲಿ ಬೃಹತ್ ಗಾತ್ರದ‌ ಮರ ರಸ್ತೆಗುರುಳಿದ್ದರಿಂದ ರಸ್ತೆ ತಡೆ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಂಬ ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯವುಂಟಾಗಿದೆ.

 

 

Scroll to Top