ಕೊಯಿಲ: ಬೈಕ್ ಗಳ ನಡುವೆ ಢಿಕ್ಕಿ ➤ ಕಡಬ ನಿವಾಸಿಗಳು ಸೇರಿದಂತೆ ಮೂವರಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಎ.21. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಸೇರಿದಂತೆ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ಗುರುವಾರದಂದು ಸಂಭವಿಸಿದೆ.







ಕೊಯಿಲ ನೂಜಿಮಾರ್ ನಿವಾಸಿ ಮೋನಪ್ಪ ಎಂಬವರು ಸೊಸೈಟಿಗೆ ಹಾಲು ಕೊಟ್ಟು ನಂತರ ಗ್ರಾಮ ಪಂಚಾಯತ್ ಕಚೇರಿಯ ಕಡೆಗೆ ತನ್ನ ಬೈಕ್ ತಿರುಗಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಟಿವಿಎಸ್ ಅಪಾಚಿ ಬೈಕ್ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಬೈಕ್‌ಗಳು ಪಲ್ಟಿಯಾಗಿದ್ದು, ಘಟನೆಯಲ್ಲಿ ನೂಜಿಮಾರ್ ನಿವಾಸಿ ಮೋನಪ್ಪ ಹಾಗೂ ಅಪಾಚಿ ಬೈಕ್‌ನಲ್ಲಿದ್ದ ಮರ್ಧಾಳ ನಿವಾಸಿಗಳಿಬ್ಬರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.






 

 

error: Content is protected !!
Scroll to Top