ಅಂಗಳದಲ್ಲಿ ಆಟವಾಡುತ್ತಾ ಕೊಳಚೆ ನೀರಿಗೆ ಬಿದ್ದು ನಾಲ್ಕು ವರ್ಷದ ಮಗು ಮೃತ್ಯು ➤ ಸಣ್ಣ ಮಕ್ಕಳನ್ನು ಹೊರಗಡೆ ಆಡಲು ಬಿಡುವ ವೇಳೆ ಎಚ್ಚರ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಎ.21. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದು ಪಕ್ಕದಲ್ಲಿದ್ದ ಕೊಳಚೆ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಬುಧವಾರದಂದು ನಡೆದಿದೆ‌.

ಮೃತ ಮಗುವನ್ನು ವೀರಾಪುರ ಗ್ರಾಮದ ಬಸವರಾಜ್ ಎಂಬವರ ಪುತ್ರ ಸೋಮೇಶ್ ಎಂದು ಗುರುತಿಸಲಾಗಿದೆ. ಸೋಮೇಶ್ ಎಂದಿನಂತೆ ಇಂದು ಬೆಳಿಗ್ಗೆ ಮನೆಯ ಅಂಗಳದಲ್ಲಿ ಆಟವಾಡುತ್ತಾ ಪಕ್ಕದಲ್ಲಿದ್ದ ಕೊಳಚೆ ಗುಂಡಿಗೆ ಬಿದ್ದಿದೆ ಎನ್ನಲಾಗಿದೆ. ಮನೆಯ ಮುಂಭಾಗದಲ್ಲಿದ್ದ ಮಗು ಕಾಣೆಯಾದ ಹಿನ್ನೆಲೆಯಲ್ಲಿ ಹುಡುಕಾಡಿದ ಪೋಷಕರಿಗೆ ಸಂಜೆ ವೇಳೆಗೆ ಮಗುವಿನ ಮೃತದೇಹ ಕೊಳಚೆ ನೀರಿನಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಬಳ್ಳಾರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಟ್ಟ ಮಕ್ಕಳು ಆಟವಾಡುವ ವೇಳೆ ಇಂತಹ ಅವಘಡಗಳು ಮರುಕಳಿಸದಂತೆ ಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ.

Also Read  ನಾಡಹಬ್ಬ 'ದಸರಾ' ಆಚರಣೆ ಮೇಲೂ ಕೊರೋನಾ ಕರಿ ನೆರಳು!

 

 

error: Content is protected !!
Scroll to Top