ಸೈಕಲ್ ನಲ್ಲಿ ಆಡುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿ ➤ ಆರು ವರ್ಷದ ಬಾಲಕ ಮೃತ್ಯು



(ನ್ಯೂಸ್ ಕಡಬ) newskadaba.com ಮಂಗಳೂರು, ಎ.21. ಸೈಕಲ್ ನಲ್ಲಿ ಆಡುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ನಗರದ ಬಜಾಲ್ ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.







ಮೃತ ಬಾಲಕನನ್ನು ಬಜಾಲ್‌ ನಿವಾಸಿ ಹಿದಾಯತುಲ್ಲ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಎಂದು ಗುರುತಿಸಲಾಗಿದೆ. ಮೃತ ಬಾಲಕ ಬಜಾಲ್ ಕಟ್ಟೆಪುಣಿ ಕೋರ್ದಬ್ಬು ದೈವಸ್ಥಾನದ ಹಿಂಭಾಗದ ರಸ್ತೆಯ ಕೆರೆಯ ಬಳಿ ಸೈಕಲ್‌ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬಾಲಕ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.






 

 

error: Content is protected !!
Scroll to Top