ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ.09. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಗುರುವಾರದಂದು ಮದ್ಯದಂಗಡಿ ಆರಂಭಗೊಂಡಿದೆ.

ಮದ್ಯದಂಗಡಿಯನ್ನು ವಿರೋಧಿಸಿ ಮರ್ಧಾಳ ಪರಿಸರದ ಗ್ರಾಮಸ್ಥರು ಕಾನೂನಾತ್ಮಕ ಹೋರಾಟಕ್ಕಿಳಿದಿದ್ದು, ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಹಲವು ಮನವಿಗಳನ್ನು ಅರ್ಪಿಸಿದ್ದರು. ಒಂದೆಡೆ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಯ ಬಗ್ಗೆ ಯಾವುದೇ ಅರ್ಜಿಗಳು ಇಲಾಖೆಗೆ ಬಂದಿಲ್ಲ ಎಂದು ಗ್ರಾಮಸ್ಥರನ್ನು ನಂಬಿಸಿ ಇನ್ನೊಂದೆಡೆ ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ರಾಜ್ಯ ಹೆದ್ದಾರಿಯಿಂದ 100 ಮೀಟರ್ ಹಾಗೂ ಪರಿಶಿಷ್ಟ ಜಾತಿ ಕಾಲನಿಯಿಂದ 20 ಮೀಟರ್ ದೂರದಲ್ಲಿ ಮದ್ಯದಂಗಡಿ ತೆರೆಯಲು ಅಬಕಾರಿ ಇಲಾಖೆಯು ಪರವಾನಿಗೆ ನೀಡಿದ್ದು, ಇದು ಅಕ್ರಮವಾಗಿದೆ.

Also Read  ವಿದ್ಯೆ, ಸಂಸ್ಕೃತಿಯ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ-ನಳಿನ್ ಕುಮಾರ್ ಕಟೀಲ್ ➤ ಪಾಲ್ತಾಡಿ : ಶ್ರೀಗಣೇಶೋತ್ಸವ, ಸಾಧಕರಿಗೆ ಅಭಿನಂದನೆ

ಎ.ಬಿ.ಮನೋಹರ ರೈ,
ಅಧ್ಯಕ್ಷರು, ಎಲ್.ಡಿ. ಬ್ಯಾಂಕ್ ಪುತ್ತೂರು

ಮದ್ಯದಂಗಡಿ ತೆರೆಯಲು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಅನುಮತಿ ನೀಡಲು ಪೂರಕ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಅನುಮತಿ ನೀಡಲಾಗಿದೆ.

ಸುಬ್ರಹ್ಮಣ್ಯ ಪೈ
ಅಬಕಾರಿ ವೃತ್ತ ನಿರೀಕ್ಷಕರು, ಪುತ್ತೂರು

error: Content is protected !!
Scroll to Top