ಬೀಡಿ ಬ್ರಾಂಚ್ ನಿಂದ ಬೀಡಿ, ತಂಬಾಕು ಕಳವು ಪ್ರಕರಣ ➤ ಆರೋಪಿ ಅಂದರ್..!!

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 11. ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದಲ್ಲಿರುವ ಬೀಡಿ ಬ್ರಾಂಚ್ ಒಂದರಿಂದ ತಂಬಾಕು ಮತ್ತು ಬೀಡಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.


ಬಂಧಿತ ಆರೋಪಿಯನ್ನು ಬೆಳಂದೂರು ಗ್ರಾಮದ ಕುದ್ಮಾರು ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್ ಕುಂಞಿ ಎಮ್ ಎಂದು ಗುರುತಿಸಲಾಗಿದೆ. ಇವರು ಮಾ. 8ರಂದು ಬೀಡಿ ಬ್ರಾಂಚ್‌ವೊಂದರ ಬೀಗವನ್ನು ಒಡೆದು ಒಳನುಗ್ಗಿ 2 ಗೋಣಿ ತಂಬಾಕು ಮತ್ತು ಸುಮಾರು 18 ಸಾವಿರ ಬೀಡಿಗಳನ್ನು ಕಳವು ಮಾಡಿದ್ದರು. ಈ ಕುರಿತು ಬೀಡಿ ಬ್ರಾಂಚ್‌ನ ಮಾಲಕ ಕೆ.ಮಹಮ್ಮದ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆ ಕಾರ್ಯ ನಡೆಸಿ ಆರೋಪಿಯನ್ನು ಮಾ.10ರಂದು ಬಂಧಿಸಿದ್ದಾರೆ.

Also Read  ಮಂಗಳೂರು: ಕನ್ನಡ ರಾಜ್ಯೋತ್ಸವ 2022 ಆಚರಣೆ ➤ ಎಲ್ಲೆಡೆ ಕನ್ನಡ ಬೆಳಗಲಿ, ಮೊಳಗಲಿ- ಡಾ|| ಚೂಂತಾರು

 

error: Content is protected !!
Scroll to Top