ಉಕ್ರೇನ್ ನಲ್ಲಿ ಭಾರತೀಯ ಮತ್ತೋರ್ವ ವಿದ್ಯಾರ್ಥಿಗೆ ಗುಂಡೇಟು..!!!?

(ನ್ಯೂಸ್ ಕಡಬ) newskadaba.com ರೆಸ್ಜೋವ್, ಮಾ. 04. ಉಕ್ರೇನ್‌ ರಾಜಧಾನಿ ಕೀವ್‌ ನಲ್ಲಿ ಭಾರತೀಯ ವಿದ್ಯಾರ್ಥಿ ಓರ್ವನಿಗೆ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಇಲಾಖೆ ರಾಜ್ಯ ಖಾತೆ ಸಚಿವ ಜನರಲ್‌ ವಿ.ಕೆ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ಗುಂಡಿನೇಟು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Scroll to Top