ಕಾಣಿಯೂರು: ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ..!! ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಕಾಣಿಯೂರು, ಮಾ. 04. ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ ಘಟನೆ ಕಾಣಿಯೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬಂಡಾಜೆ ನಿವಾಸಿ ಚಂದ್ರಶೇಖರ(57) ಎಂದು ಗುರುತಿಸಲಾಗಿದೆ. ಯುವತಿಯ ಸಹೋದರನು ತಂದೆ ತಾಯಿಯನ್ನು ಚಾರ್ವಾಕದಲ್ಲಿರುವ ಜಮೀನಿಗೆ ಬಿಟ್ಟು ಬರಲೆಂದು ಹೋದ ಸಂದರ್ಭ ಮನೆಯಲ್ಲಿ ಬುದ್ದಿಮಾಂದ್ಯ ಯುವತಿ ಒಬ್ಬಳೇ ಇದ್ದಳು. ಸಹೋದರ ವಾಪಾಸು ಮನೆಗೆ ಹಿಂತಿರುಗಿದಾಗ ಅಕ್ಕ ಕಾಣದೇ ಇದ್ದು, ಹುಡುಕಾಡಿದಾಗ ಮನೆಯ ಎದುರಿನ ಗುಡ್ಡದಿಂದ ಬರುತ್ತಿದ್ದಳು. ಆಕೆಯನ್ನು ವಿಚಾರಿಸಿದಾಗ ಚಂದ್ರಶೇಖರ ನನ್ನ ಜೊತೆ ನೀನು ಗುಡ್ಡಕ್ಕೆ ಬರಬೇಕು. ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ ಎಂದು ಬೆದರಿಸಿ ಕರೆದೊಯ್ದಿರುವುದಾಗಿ ಹೇಳಿದ್ದಾಳೆ. ಈ ಕುರಿತು ಪೊಲೀಸ್ ದೂರು ನೀಡಲಾಗಿದೆ.

Also Read  ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤‌ ಗೋಮಾಂಸ ಸಹಿತ ಆರೋಪಿ ವಶಕ್ಕೆ

error: Content is protected !!
Scroll to Top