ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಗುಡ್ ನ್ಯೂಸ್ ► ಬಳಕೆಯಾಗದೇ ಉಳಿದ ಡಾಟಾವನ್ನು ಮುಂದಿನ ತಿಂಗಳು  ಬಳಕೆ ಮಾಡಬಹುದು

(ನ್ಯೂಸ್ ಕಡಬ) newskadaba.com ನವದೆಹಲಿ, ನ.8. ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ ಮಾಡಬಹುದಾದ ಸೌಲಭ್ಯವನ್ನು ಘೋಷಿಸಿದೆ.

ರೋಲ್‍ಓವರ್ ಸೌಲಭ್ಯ ಎಂಬ ಹೊಸ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ತಾವು ಬಳಕೆ ಮಾಡದೇ ಇರುವ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡುವ ಅವಕಾಶವನ್ನು ನೀಡಿದೆ.

ಈ ಹೊಸ ಸೌಲಭ್ಯ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಉತ್ತಮವಾದ ಕೊಡುಗೆಯಾಗಿರಲಿದೆ ಎಂದು ಭಾರತಿ ಏರ್ ಟೆಲ್ ನ ಸಿಇಒ ತಿಳಿಸಿದ್ದಾರೆ.

Also Read  ಮನೆಯಲ್ಲಿ ನೆಮ್ಮದಿಯೇ ಇಲ್ಲ ಅನ್ನೋರು ಅಗ್ನೇಯ ದಿಕ್ಕಿನಲ್ಲಿ ಇದೊಂದು ಕೆಲಸ ಮಾಡಿ! ಕಷ್ಟಗಳು ಪರಿಹಾರ ಆಗುತ್ತದೆ


ಸುಮಾರು 1,000 ಜಿಬಿ ವರೆಗಿನ ಡಾಟಾವನ್ನು ಹಾಗೆಯೇ ಉಳಿಸಿಕೊಳ್ಳಬಹುದಾಗಿದ್ದು, ಮೈ ಏರ್ ಟೆಲ್ ಆಪ್ ಮೂಲಕ ಡಾಟಾ ಬ್ಯಾಲೆನ್ಸ್ ನ್ನು ತಿಳಿದುಕೊಳ್ಳಬಹುದಾಗಿದೆ. ಭಾರತದ 87 ನಗರಗಳಲ್ಲಿ ಏರ್ ಟೆಲ್ ವಿ-ಫೈಬರ್ ಸುಮಾರು 1000 ಎಂಬಿಪಿಎಸ್ ಸ್ಪೀಡ್ ಇಂಟರ್ ನೆಟ್ ನ್ನು ಒದಗಿಸುತ್ತಿದ್ದು 2.1 ಮಿಲಿಯನ್ ಜನರು ಏರ್ ಟೆಲ್ ಬ್ರಾಡ್ ಬ್ಯಾಂಡ್ ನ್ನು ಬಳಕೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜುಲೈ ನಲ್ಲಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಏರ್ ಟೆಲ್ ಇದೇ ಸೌಲಭ್ಯವನ್ನು ಒದಗಿಸಿತ್ತು.

error: Content is protected !!
Scroll to Top