ಧರ್ಮಸ್ಥಳ ಬಜರಂಗದಳ ಮುಖಂಡನಿಂದ ದಲಿತ ವ್ಯಕ್ತಿಯ ಹತ್ಯೆ ➤ ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಕರ್ನಾಟಕ ತಂಡ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 02. ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಕರ್ನಾಟಕದ ವತಿಯಿಂದ ಇದರ ರಾಜ್ಯಾಧ್ಯಕ್ಷರಾದ ಹರಿರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಗ್ನಾಡಿ ಅವರ ತಂಡ ಇತ್ತೀಚೆಗೆ ಹತ್ಯೆಯಾದ ದಿನೇಶ್ ಕನ್ಯಾಡಿಯವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.


ನಂತರ ದ‌.ಕ. ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ನೊಂದ ಕುಟುಂಬಕ್ಕೆ ಅರೋಪಿಯ ಸಹೋದರರ ಬೆದರಿಕೆಯ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಸಮಾಜ ಕಲ್ಯಾಣ ಅಧಿಕಾರಿಗಳ ಜೊತೆ ಮಾತನಾಡಿ ಕುಟುಂಬಕ್ಕೆ ಯೋಗ್ಯ ರೀತಿಯ ಪರಿಹಾರ ನೀಡುವ ಬಗ್ಗೆ ದಿನೇಶ್ ಪತ್ನಿಗೆ ಸರ್ಕಾರಿ ನೌಕರಿ ಹಾಗೂ ನಿವೇಶನ ನೀಡುವ ಬಗ್ಗೆ ಚರ್ಚಿಸಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಹರಿರಾಮ್, ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಅಗ್ನಾಡಿ ಹಾಗೂ ಅನ್ಸಾರ್ ವಿಟ್ಲ, ಉಪಾಧ್ಯಕ್ಷರಾದ ಶೈಲಜಾ ಅಮರನಾಥ್, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷ ಆರ್ ಜಗನಾಥ್, ರಾಜ್ಯ ಸಮಿತಿ ಸದಸ್ಯ ಸುಕನ್ಯಾ ಹರಿದಾಸ್ ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು.

Also Read  Breaking news ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ

error: Content is protected !!
Scroll to Top