ಅರಂತೋಡು: ಎ.ಕೆ‌ ಫ್ಯಾಮಿಲಿ ಮೀಟ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅರಂತೋಡು, ಫೆ. 16. ಅರಂತೋಡು ಎ.ಕೆ.(ಅಹಮದ್ ಕುಂಞ)ರವರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಫೆ.13 ರಂದು ಅರಂತೋಡಿನ ಉದಯನಗರದಲ್ಲಿ ಸ್ಥಾಪಕಾಧ್ಯಕ್ಷರಾದ ನಿವೃತ ಸೈನಿಕ ಫಸೀಲು ಎ ರವರ ಮನೆಯಾದ ನವಾಜ್ ಮಂಜಿಲ್ ನಲ್ಲಿ ನಡೆಯಿತು.

ಕುಟುಂಬ ಸದಸ್ಯರಿಗೆ ಅಟೋಟ ಸ್ಪರ್ಧೆ ಮತ್ತು ಕುಟುಂಬದಲ್ಲಿ ಹಿರಿಯರಾದ ದಿ॥ ಅಹ್ಮದ್ ಕುಂಞ ಅವರ ಧರ್ಮ ಪತ್ನಿ ಬೀಪಾತಿಮ ಮತ್ತು ಸೇನೆಯಲ್ಲಿ ಸೇವೆ ಮಾಡುತ್ತಿರುವ ಶ್ರೀಮತಿ ಮುಬೀನ ಕಡಬ ಮತ್ತು ಹಿರಿಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಅಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಉಮ್ಮರ್ ಕುಶಾಲನಗರ, ಇದಿನಬ್ಬ ಕಡಬ, ಯೂಸುಫ್ ಮರೂರು, ಯೂಸುಫ್ ಕೆ.ಕಡಂಬು ಮಕದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಲೈಲಾ ಕಡಬ ಸ್ವಾಗತಿಸಿ, ಮೖೊನುದ್ದೀನ್ ನೀರಕಟ್ಟೆ ಕುಟುಂಬ ಸದಸ್ಯರನ್ನು ಬರಮಾಡಿಕೊಂಡರು.

Also Read  Big Breaking ► ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ...? ► ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು...!

error: Content is protected !!
Scroll to Top