ಪುತ್ತೂರು: ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಿಕ್ಷಾದಲ್ಲೇ ಪತ್ತೆ..!

(ನ್ಯೂಸ್ ಕಡಬ) newskadaba.com ಪುತ್ತೂರು,‌ ಫೆ. 16.‌ ಬಾಡಿಗೆಗೆಂದು ಆಟೋ ರಿಕ್ಷಾದಲ್ಲಿ ಹೋದ ಆಟೋ ಚಾಲಕರೋರ್ವರ ಮೃತದೇಹವು ಬಲ್ನಾಡಿನ ಮಚ್ಚಿಮಲೆ ಬೊಲ್ಲಾಣ ರಸ್ತೆಯ ಮಧ್ಯೆ ರಿಕ್ಷಾದಲ್ಲಿ ಬುಧವಾರದಂದು ಬೆಳಗ್ಗೆ ಪತ್ತೆಯಾಗಿದೆ.


ಮೃತ ಚಾಲಕನನ್ನು ಬಲ್ನಾಡು ಉಜ್ರುಪಾದೆ ನಿವಾಸಿ ಸುಂದರ ಪಿ ಎಂದು ಗುರುತಿಸಲಾಗಿದೆ. ಫೆ. 13ರಂದು ಮನೆಯಿಂದ ಆಟೋ ರಿಕ್ಷಾದಲ್ಲಿ ಬಾಡಿಗೆಗೆಂದು ತೆರಳಿದ್ದ ಅವರು ಮನೆಗೆ ಬಾರದೇ ಇದ್ದುದರಿಂದ ಸುಂದರ ಅವರಿಗೆ ಮೊಬೈಲ್ ಪೋನ್ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಬಾಕಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸುಂದರರವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಸುಂದರ ಅವರ ಮೃತ ದೇಹ ಅವರ ರಿಕ್ಷಾದಲ್ಲೇ ಪತ್ತೆಯಾಗಿದೆ.

Scroll to Top