ಹಿಜಾಬ್ ವಿವಾದ- ಸೋಮವಾರದಿಂದ ಹತ್ತನೇ ತರಗತಿವರೆಗೆ ಶಾಲೆ ಆರಂಭ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 11. ಹಿಜಾಬ್ ಕೇಸರಿ ವಿವಾದದ ಹಿನ್ನೆಲೆ ಸರಕಾರವು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದು, ಸೋಮವಾರದಿಂದ ಹತ್ತನೇ ತರಗಿತಿಯವರೆಗೆ ಮಾತ್ರ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಹಿಜಾಬ್ ಕೇಸರಿ ಶಾಲು ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಸ್ತೃತ ಪೀಠ, ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿ, ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಲಿ. ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ ಎಂದು ಸೂಚಿಸಿದೆ.

Also Read  ಭೂಮಾಪನ ಇಲಾಖೆಯಲ್ಲಿ ಟ್ಯಾಗ್ ವಿತರಣೆ

error: Content is protected !!
Scroll to Top