ಬಂಟ್ವಾಳ ಬಾರ್ ನಲ್ಲಿ ಚೂರಿ ಇರಿತ ➤ ಇಬ್ಬರಿಗೆ ಗಾಯ..!



(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 11. ಬಾರ್ ನಲ್ಲಿ ಕುಡಿತದ ಬಳಿಕ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಜಗಳ ನಡೆದು ಬಳಿಕ ಚೂರಿಯಿಂದ ಇರಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ನಡೆದಿದೆ.








ಗಾಯಗೊಂಡವರನ್ನು ಕಿಶೋರ್ ಹಾಗೂ ದಯಾನಂದ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಅರದಬಿಗುಡ್ಡೆ ನಿವಾಸಿಗಳಾದ ಸುಚಿತ್, ಸಚಿನ್, ಧನು ಹಾಗೂ ಪುರುಷ ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top