ಸುಳ್ಯ: ಕಾರು ಪಲ್ಟಿ ➤ ಪ್ರಯಾಣಿಕರು ಪಾರು..!



(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 08. ಅತಿ ವೇಗವಾಗಿ ಕೇರಳ ಕಡೆಯಿಂದ ಬರುತ್ತಿದ್ದ ಬಲೆನೊ ಕಾರೊಂದು ಪಲ್ಟಿಯಾದ ಘಟನೆ ಇಲ್ಲಿನ ನಾಗಪಟ್ಟಣ ವಿಶ್ರಾಂತಿಗೃಹದ ಬಳಿ ತಿರುವಿನಲ್ಲಿ ನಡೆದಿದೆ.







ಕಾರಿನಲ್ಲಿ ಮಡಿಕೇರಿ ಮೂಲದ ಯುವಕ ಮತ್ತು ಯುವತಿಯಿದ್ದು, ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಅತಿಯಾದ ವೇಗದಿಂದ ಇದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.‌ ಕಾರಿನಲ್ಲಿದ್ದ ಯುವಕ ಯುವತಿ ಅನ್ಯಕೋಮಿನವರಾಗಿದ್ದು, ವಿಚಾರಣೆಗಾಗಿ ಪೊಲೀಸ್ ಕಸ್ಟಿಡಿಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.






error: Content is protected !!
Scroll to Top