(ನ್ಯೂಸ್ ಕಡಬ) newskadaba.com ತ್ರಿಶ್ಯೂರ್, ಫೆ. 08. ಐದು ವರ್ಷದ ಬಾಲಕಿಯನ್ನು ಕಾಡಾನೆಯೊಂದು ತುಳಿದು ಹತ್ಯೆ ನಡೆಸಿರುವ ಘಟನೆ ಕೇರಳದ ಆತಿರಪಿಲ್ಲಿ ಕನ್ನಂಕುಝಿ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಿಖಿಲ್ ಎಂಬವರ ಪುತ್ರಿ ಅಗ್ನಿಮಿಯಾ ಎಂದು ಗುರುತಿಸಲಾಗಿದೆ. ಕೇರಳದ ಮಾಲಾ ಎಂಬಲ್ಲಿ ಅಜ್ಜಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ತಂದೆ ತಾಯಿ ಜೊತೆಗೆ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗವೊಂದು ದಾಳಿ ನಡೆಸಿದ್ದು, ಬಾಲಕಿಯ ತಲೆಗೆ ತುಳಿದು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.