(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ಶ್ರೀನಿವಾಸ್ ವಿಶ್ವವಿದ್ಯಾಲಯ, ಮುಕ್ಕ ಕ್ಯಾಂಪಸ್‍ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎರ್ಮಜಿಂಗ್ ಟೆಕ್ನೋಲಜಿಸ್ ನ್ನು ಉದ್ಘಾಟಿಸಲಾಯಿತು.
ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಡಾ.ಸಿಎ. ಎ ರಾಘವೇಂದ್ರ ರಾವ್ ಕುಲಪತಿ, ಡಾ.ಎ. ಶ್ರೀನಿವಾಸ್ ರಾವ್ ಪ್ರೊ ಚಾನ್ಸಲರ್, ಡಾ.ಪಿ.ಎಸ್. ಐತಾಳ್ ಉಪಕುಲಪತಿ, ಡಾ. ಅನಿಲ್ ಕುಮಾರ್ ರಿಜಿಸ್ಟ್ರಾರ್, ಡಾ.ಶ್ರೀನಿವಾಸ ಮಯ್ಯ ರಿಜಿಸ್ಟ್ರಾರ್ ಮೌಲ್ಯಮಾಪನ, ಡಾ.ಅಜಯ್ ಕುಮಾರ್ ರಿಜಿಸ್ಟ್ರಾರ್ ಡೆವೆಲಪ್ಮೆಂಟ್, ಡಾ. ಥಾಮಸ್ ಪಿಂಟೋಡೀನ್, ಪ್ರೊ.ಸಂಜಯ್ ಎಸ್, ತರಬೇತಿ ಮತ್ತು ಉದ್ಯೋಗಗಳ ಮುಖ್ಯಸ್ಥರು ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಥ್ನೋಟೆಕ್ ಅಕಾಡೆಮಿಕ್ ಸಲ್ಯೂಷನ್ಸ್ ನಿಂದ, ಸಲಹೆಗಾರ ಡಾ.ಬಿ.ಜಿ.ಸಂಗಮೇಶ್ವರ, ಅಧ್ಯಕ್ಷ ಕಿರಣ್ ರಾಜಣ್ಣ ಮತ್ತು ನಿರ್ದೇಶಕರಾದ ಶ್ರೀ ಅರುಣ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಶ್ರೀನಿವಾಸ್ ವಿಶ್ವವಿದ್ಯಾನಿಲಯ, ಮಂಗಳೂರಿನ ಮತ್ತು ಎಥ್ನೋಟೆಕ್ ಅಕಾಡೆಮಿಕ್ ಸಲ್ಯೂಷನ್ಸ್ ಬೆಂಗಳೂರಿನ ಸಹಯೋಗದಲ್ಲಿ ಈ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವು ಅಮೆಜಾನ್, ಮೈಕ್ರೋಸಾಫ್ಟ್, ಸಿಸ್ಕೊ, ಫೆಸ್ಟೊ ಮುಂತಾದವುಗಳಿಂದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಇತ್ತೀಚಿನ ತಂತ್ರಜ್ಞಾನಗಳು ಮತ್ತುಅಂತರರಾಷ್ಟ್ರೀಯ ಪ್ರಮಾಣೀಕರಣಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಎ ಪ್ಲಸ್ ಸ್ಟ್ರೀಮ್‍ಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಉತ್ಕೃಷ್ಟತೆಯ ಕೇಂದ್ರದಿಂದ ಪ್ರಯೋಜನ ಪಡೆಯುತ್ತಾರೆ.