ಕಡಬ: ನಿರ್ವಾಹಕನನ್ನು ಬಿಟ್ಟು ಮುಂದೆ ಸಾಗಿದ ಕೆಎಸ್ಸಾರ್ಟಿಸಿ ಬಸ್….!!

(ನ್ಯೂಸ್ ಕಡಬ) newskadaba.com ಕಡಬ, ಫೆ. 03. ತನ್ನ ಜೊತೆ ಕರ್ತವ್ಯದಲ್ಲಿದ್ದ ಬಸ್ ನಿರ್ವಾಹಕರನ್ನೇ ಬಸ್ ಚಾಲಕನೋರ್ವ ಕಡಬದಲ್ಲೇ ಬಿಟ್ಟು ಮರ್ದಾಳದ ನೀರಾಜೆ ತನಕ ಪ್ರಯಾಣಿಸಿದ ಘಟನೆ ಕಡಬದಲ್ಲಿ ಗುರುವಾರದಂದು ನಡೆದಿದೆ.

ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಎಂದಿನಂತೆ ತೆರಳುವ ಬಸ್ ಇಂದು ಬೆಳಗ್ಗೆ ಸುಮಾರು 8:30ರ ಹೊತ್ತಿಗೆ ಕಡಬ ಪೇಟೆಯಲ್ಲಿ ತಲುಪಿದ್ದು, ಇದರಿಂದ ಇಳಿದ ಕಂಡಕ್ಟರ್ ಬಸ್ ನಿಲ್ದಾಣದ ಇಲಾಖಾ ಕಛೇರಿಗೆ ತೆರಳಿದ್ದರು. ಬಸ್ ಹೊರಡುವ ಸಮಯವಾದಾಗ ನಿರ್ವಾಹಕ ಬಸ್ ಏರದೇ ಇರುವುದನ್ನು ಗಮನಿಸದ ಚಾಲಕ ಬಸ್ ನ್ನು ಚಲಾಯಿಸಿದ್ದು, ಸುಮಾರು ಎರಡು ಕಿ.ಮೀ ಮುಂದೆ ಸಾಗಿದಾಗ ವಿದ್ಯಾರ್ಥಿಗಳು ಬಸ್ ನಲ್ಲಿ ನಿರ್ವಾಹಕ ಇಲ್ಲದೇ ಇರುವುದನ್ನು ಗಮನಿಸಿ, ಕೂಡಲೇ ಚಾಲಕನ ಗಮನಕ್ಕೆ ತಂದು ಬಸ್ ನಿಲ್ಲಿಸಿದ್ದಾರೆ. ಕೂಡಲೇ ಬಸ್ ತೆರಳಿದ್ದನ್ನು ಅರಿತ ನಿರ್ವಾಹಕ ಕಡಬದಿಂದ ವ್ಯಕ್ತಿಯೋರ್ವರ ಬೈಕ್ ಏರಿ ಬಸ್ಸನ್ನು ಹತ್ತಿಕೊಂಡಿದ್ದಾರೆ…

Also Read  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

error: Content is protected !!
Scroll to Top