ಭಾರತ – ನ್ಯೂಝಿಲೆಂಡ್ ಟ್ವೆಂಟಿ-20 ಸರಣಿ ಪಂದ್ಯ ► 6 ರನ್‌ಗಳ ಜಯದೊಂದಿಗೆ ಸರಣಿ ಗೆದ್ದ ಭಾರತ

(ನ್ಯೂಸ್ ಕಡಬ) newskadaba.com ತಿರುವನಂತಪುರ, ನ.07. ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 6 ರನ್‌ಗಳ ಜಯ ಗಳಿಸಿದ್ದು, 2-1 ಅಂತರದಲ್ಲಿ ವಿಜಯದ ನಗೆ ಬೀರಿದೆ.

ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಇಂದು ನಡೆದ ಟ್ವೆಂಟಿ-20 ಪಂದ್ಯವನ್ನು ಭಾರೀ ಮಳೆಯಿಂದಾಗಿ ತಲಾ 8 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡು ಗೆಲುವಿಗೆ 68 ರನ್ ಗಳ ಸವಾಲನ್ನು ಪಡೆದು ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 61 ರನ್ ಗಳಿಸಿತು.

3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಉಭಯ ತಂಡಗಳು 1-1 ಪಂದ್ಯಗಳಲ್ಲಿ ಜಯ ಗಳಿಸಿದ್ದವು. ಆದ್ದರಿಂದ ಸರಣಿ ಗೆಲುವಿಗೆ ಈ ಪಂದ್ಯವು ನಿರ್ಣಾಯಕವಾಗಿತ್ತು. ಅದರಂತೆ ಅಂತಿಮ ಪಂದ್ಯದಲ್ಲಿ ತಾಯ್ನೆಲದಲ್ಲಿ ಸರಣಿ ಗೆಲುವನ್ನು ಗೆಲ್ಲುವ ಮೂಲಕ ಭಾರತವು ಮರ್ಯಾದೆಯನ್ನು ಉಳಿಸಿಕೊಂಡಿತು.

Also Read  ಶಕೀಬ್ ಅಲ್ ಹಸನ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ

error: Content is protected !!
Scroll to Top