ಅರಂತೋಡು: ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 26. ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮತ್ತು ಇತರ ಶೈಕ್ಷಣಿಕ ಸಂಘಗಳ ಸಹಕಾರದೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಮತ್ತು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.


ಇದರ ಧ್ವಜಾರೋಹಣವನ್ನು ಪಾಪ್ಯುಲರ್ ಎಜುಕೇಷನ್‌ ಸೊಸೈಟಿ ನಿರ್ದೇಶಕರಾದ ಶ್ರೀ ಜತ್ತಪ್ಪ ಮಾಸ್ತರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ಎಸ್. ವಹಿಸಿ, ಶುಭ ಹಾರೈಸಿದರು. ಶಾಲಾ ಮುಖ್ಯಗುರು ಶ್ರೀ ಸೀತಾರಾಮ ಎಂ. ಕೆ, ಅರಂತೋಡು ತೊಡಿಕಾನ ಸೊಸೈಟಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆ, ಕುಸುಮಾಧರ ಅಡ್ಕಬಳೆ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಮೋಹನ್ ಚಂದ್ರ, ದೈಹಿಕ ಶಿಕ್ಷಕರಾದ ಶ್ರೀಮತಿ ಶಾಂತಿ, ಶ್ರೀ ಜಯರಾಮ್, ಸ್ಕೌಟ್ ಮಾರ್ಗದರ್ಶಕರಾದ ಶ್ರೀ ಮನೋಜ್ ಕುಮಾರ್, ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದ ಮಾರ್ಗದರ್ಶಕರಾದ ಶ್ರೀ ಪದ್ಮಕುಮಾರ್ ಮತ್ತು ಇತರ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಶ್ರೀ ಯಶವಂತ ಮತ್ತು ಸಹೋದರರು ಪಟ್ರಕೋಡಿ ಸುಳ್ಯ ಇವರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸಹಕರಿಸಿದರು.

Also Read  ಅನಂತಕುಮಾರ್ ನಿಧನಕ್ಕೆ ವಿಕೃತಿ ಮೆರೆದ 'ಮಂಗಳೂರು ಮುಸ್ಲಿಮ್ಸ್' ಫೇಸ್‌ಬುಕ್‌ ಪೇಜ್ ► ಪಾಂಡೇಶ್ವರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು

 

 

error: Content is protected !!
Scroll to Top