Oppo F3 ಪ್ಲಸ್ ಸ್ಮಾರ್ಟ್ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಇಳಿಕೆ ► ಈ ವೀಶೇಷ ಆಫರ್ ಇವತ್ತು(ಮಂಗಳವಾರ) ಒಂದು ದಿನ ಮಾತ್ರ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.7.  ಒಪ್ಪೋ ಎಫ್3 ಪ್ಲಸ್ ಸ್ಮಾರ್ಟ್ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಕಡಿತಗೊಂಡಿದೆ. ಈ ವರ್ಷದ ಏಪ್ರಿಲ್ ನಲ್ಲಿ ಈ ಫೋನ್ ಬಿಡುಗಡೆಯಾದಾಗ 30,990 ರೂ. ದರ ನಿಗದಿ ಪಡಿಸಿತ್ತು. ಆದರೆ ಈಗ ಈ ಫೋನ್ 24,990 ರೂ. ದರದಲ್ಲಿ ಮಾರಾಟವಾಗುತ್ತಿದೆ.

ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ದರ ಕಡಿತ ಮಾರಾಟವಿದ್ದು, ಈ ವೀಶೇಷ ಆಫರ್ ಇವತ್ತು(ಮಂಗಳವಾರ) ಒಂದು ದಿನ ಮಾತ್ರ ಇರಲಿದೆ. 6 ಇಂಚಿನ ಸ್ಕ್ರೀನ್ ಜೊತೆ ಮುಂದುಗಡೆ ಸೆಲ್ಫಿಗಾಗಿ ಎರಡು ಕ್ಯಾಮೆರಾ ಇರುವುದು ಈ ಫೋನಿನ ವಿಶೇಷತೆ.

ಒಪ್ಪೋ ಎಫ್3 ಪ್ಲಸ್ ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಲ್ಪೇ:

163.3*80.8*7.4 ಮೀ ಗಾತ್ರ, 185 ಗ್ರಾಂ ತೂಕ ಹೈಬ್ರಿಡ್ ಡ್ಯುಯಲ್ ಸಿಮ್, 6 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್,16:9 ಅನುಪಾತ, 367 ಪಿಕ್ಸೆಲ್) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

Also Read  ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲವೆ ? ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಪ್ಲಾಟ್ ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 653 ಅಕ್ಟಾಕೋರ್ ಪ್ರೊಸೆಸರ್,  Adreno  510 ಗ್ರಾಫಿಕ್ಸ್ ಪ್ರೊಸೆಸರ್

ಮೆಮೊರಿ:
64 ಜಿಬಿ ಆಂತರಿಕ ಮೆಮೊರಿ, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM

ಕ್ಯಾಮೆರಾ ಮತ್ತು ಇತರೇ:
ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 16 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 16 ಎಂಪಿ + 8 ಎಂಪಿ ಡ್ಯುಯಲ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 4000 ಎಂಎಚ್ ಬ್ಯಾಟರಿ.

error: Content is protected !!
Scroll to Top