ಕಡಬ: ನಾಯಿ ಅಡ್ಡಬಂದ ಪರಿಣಾಮ ಬೈಕ್ ಪಲ್ಟಿ..! ➤ ದಂಪತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜ. 23. ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ದಂಪತಿ ಗಾಯಗೊಂಡ ಘಟನೆ ಕಳಾರದಲ್ಲಿ ಭಾನುವಾರದಂದು ಮುಂಜಾನೆ ನಡೆದಿದೆ.

 

ಗಾಯಗೊಂಡ ದಂಪತಿಗಳನ್ನು ಬಲ್ಯ ಗ್ರಾಮದ ಕತ್ತರಿಗುಡ್ಡದ ಪ್ರಸಾದ್ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ. ನೇಮೋತ್ಸದ ಹಿನ್ನೆಲೆಯಲ್ಲಿ ಕಡಬಕ್ಕೆ ಹೂ ಖರೀದಿಸಲೆಂದು ಹೋಗಿ ಹಿಂತಿರುಗುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಗಾಯಾಳುಗಳಿಗೆ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

 

 

Scroll to Top