ಹಣ ಡಬಲ್ ಮಾಡುವುದಾಗಿ ಮೋಸ ಮಾಡಿದ ಟಿಕ್ ಟಾಕ್ ಸ್ಟಾರ್..! ➤ ಮಂಗಳೂರಿನ ಯುವಕನಿಂದ ಸೈಬರ್ ಕ್ರೈಂ ಠಾಣೆಗೆ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಹಣ ಡಬಲ್ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದ ಟಿಕ್ ಟಾಕ್ ಸ್ಟಾರ್ ಓರ್ವರ ವಿಡಿಯೋವನ್ನು ನೋಡಿದ ಯುವಕನೋರ್ವ ಹಣ ಹೂಡಿಕೆ ಮಾಡಿ ಮೋಸ ಹೋದ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.

 


ಟಿಕ್ ಟಾಕ್ ನಟ ಸೋನು ಶ್ರೀನಿವಾಸ ಗೌಡ ಎಂಬಾತ ಸೋಶಿಯಲ್ ಮೀಡಿಯಾ ಪ್ರೊಮೋಷನ್‌ನಲ್ಲಿ ಟ್ರೇಡರ್ ಸ್ಟೆಲ್ಲಾ ದ ಕುರಿತು ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಇದನ್ನು ನೋಡಿದ ಮಂಗಳೂರಿನ ಯುವಕನೋರ್ವ ಹಣ ಹೂಡಿಕೆ ಮಾಡಿ ಇದೀಗ ಮೋಸ ಹೋಗಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮಾತನಾಡಿದ ಯುವಕ, ಸೋನು ಶ್ರೀನಿವಾಸ ಗೌಡ ಅವರು ಟ್ರೇಡರ್ ಸ್ಟೆಲ್ಲಾ ಎಂಬ ಆಪ್‌ ಕುರಿತಾಗಿ ಮಾಡಿರುವ ವಿಡಿಯೋವನ್ನು ನಂಬಿಕೊಂಡು ನಾನು ರೂ. 10 ಸಾವಿರ ಹಣ ಕಳುಹಿಸಿದ್ದೇನೆ ಆದರೆ ಇದೀಗ ನನಗೆ ಮೋಸವಾಗಿದ್ದು, ಯಾರೂ ಹಣ ಹೂಡಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Scroll to Top