ಕಡಬ: ಸೌಭಾಗ್ಯ ಡ್ರೈವಿಂಗ್ ಸ್ಕೂಲ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.19. ಇಲ್ಲಿನ ಅನುಗ್ರಹ ಸಭಾ ಭವನದ ಸಮೀಪದ ಎಸ್.ಎ. ಕಾಂಪ್ಲೆಕ್ಸ್ ನಲ್ಲಿ ಸೌಭಾಗ್ಯ ಡ್ರೈವಿಂಗ್ ಸ್ಕೂಲ್ ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಯೂಕೋ ಬ್ಯಾಂಕ್ ಕಡಬ ಶಾಖೆಯ ಮ್ಯಾನೇಜರ್ ಸುದಾಮ ರೇ ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೆಟ್ಟಣ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಭಟ್, ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರುಗಳಾದ ಫಾ| ಅರುಣ್ ವಿಲ್ಸನ್ ಲೋಬೋ, ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಹಾಜಿ ಪಿ.ಎಂ. ಇಬ್ರಾಹಿಂ ದಾರಿಮಿ ಭಾಗವಹಿಸಿದ್ದರು. ಸಂಸ್ಥೆಯ ಮಾಲಕರಾದ ವಿಜೇಶ್ ಕೆ.ವಿ. ಅತಿಥಿಗಳನ್ನು ಬರಮಾಡಿಕೊಂಡರು. ನೂತನ ಸಂಸ್ಥೆಯಲ್ಲಿ ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್, ವಾಹನ ನೋಂದಣಿ ಸೇರಿದಂತೆ ಆರ್ಟಿಓ ಸಂಬಂಧಿತ ಎಲ್ಲಾ ಸೇವೆಗಳನ್ನು ಮಾಡಿಕೊಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 9686022290 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Scroll to Top