ಬಂಟ್ವಾಳ: ನೂತನ ಡಿವೈಎಸ್ಪಿ ಆಗಿ ಪ್ರತಾಪ್ ಟಿ. ರಾಥೋಡ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 19. ಬಂಟ್ವಾಳ ನೂತನ ಡಿವೈಎಸ್ಪಿ ಆಗಿ ಪ್ರತಾಪ್ ಟಿ.ರಾಥೋಡ್ ಅವರು ಬುಧವಾರದಂದು ಅಧಿಕಾರ ಸ್ವೀಕರಿಸಿದ್ದಾರೆ.

ಈ ಮೊದಲಿದ್ದ ವೇಲೆಂಟೈನ್ ಡಿಸೋಜ ಅವರ ವರ್ಗಾವಣೆ ಬಳಿಕ ಎ.ಎಸ್.ಪಿ.ಶಿವಾಂಶು ರಜಪೂತ್ ಅವರನ್ನು ನೇಮಕ ಮಾಡಲಾಗಿತ್ರು. ಆದರೆ ಅವರಿಗೆ ಹೆಚ್ಚಿನ ತರಬೇತಿಯ ಹಿನ್ನೆಲೆ ಇದೀಗ ಪ್ರತಾಪ್ ಟಿ. ಅವರನ್ನಿ ಬಂಟ್ವಾಳ ಡಿವೈಎಸ್ಪಿ ಆಗಿ ನೇಮಕ ಮಾಡಲಾಗಿದೆ. ಇವರು ಅನೇಕ ಕಡೆಗಳಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು, ಸಿಸಿಬಿ ಸೇರಿದಂತೆ ವಿವಿಧ ವಿಂಗ್ ಗಳಲ್ಲಿ ಕರ್ತವ್ಯ ನಿರ್ವಹಿಸಿದ ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ. ಬೆಂಗಳೂರು, ಕಾರವಾರ, ಬೆಳಗಾವಿ ಹಾಗೂ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಇದೀಗ ಬೆಂಗಳೂರು ಟೆರರಿಸ್ಟ್ ಸ್ಕ್ವಾಡ್ ನಿಂದ ಬಂಟ್ವಾಳ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದಾರೆ.

Also Read  ಕಡಬ: ಅನುಮತಿ ಹೆಸರಲ್ಲಿ ಅನಧೀಕೃತವಾಗಿ ಮರಳುಗಾರಿಕೆ !

 

 

 

error: Content is protected !!
Scroll to Top