ಗಿಫ್ಟ್ ಕಳುಹಿಸಿಕೊಡುವುದಾಗಿ ನಂಬಿಸಿದ ವಂಚಕ..! ➤ 2.92 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ 2.92 ಲಕ್ಷ ರೂ.ಗಳನ್ನು ಪಡೆದು ವಂಚನೆ ಮಾಡಿರುವ ಕುರಿತು ಮಂಗಳೂರಿನಲ್ಲಿ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿಯು ಕೆನರಾ ಬ್ಯಾಂಕ್‌ ಕೂಳೂರು ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಅವರಿಗೆ ಮನೆ ಕಟ್ಟಲು ಹಣ ನೀಡುವುದಾಗಿ ಹಾಗೂ ಗಿಫ್ಟ್ ಕೂಡ ಕಳುಹಿಸಿಕೊಡುವುದಾಗಿ +22953861930ನಿಂದ ವ್ಯಕ್ತಿಯೋರ್ವ ವಾಟ್ಸ್‌ಆಯಪ್‌ ಸಂದೇಶದ ಮೂಲಕ 2021ರ ಸೆ.20ರಂದು ತಿಳಿಸಿದ್ದ. ಅನಂತರ ಅ. 5ರಂದು 8453027805ದಿಂದ ಕರೆ ಮಾಡಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡಿ ಗಿಫ್ಟ್ ಹೊಸದಿಲ್ಲಿಗೆ ಬಂದಿದ್ದು ಅದನ್ನು ಮಂಗಳೂರಿಗೆ ಕಳುಹಿಸಿಕೊಡಲು 35,000 ರೂ. ಕಳುಹಿಸುವಂತೆ ತಿಳಿಸಿದ್ದಾನೆ. ಅದರಂತೆಯೇ ಇದನ್ನು ನಂಬಿದ ವ್ಯಕ್ತಿಯು 8453027805 ಸಂಖ್ಯೆಗೆ ಗೂಗಲ್‌ ಪೇ ಮಾಡಿದ್ದು, ನಂತರ ಆ ವ್ಯಕ್ತಿ ಮತ್ತೆ ಕರೆ ಮಾಡಿ 97,000 ರೂ.ಗಳನ್ನು ಪಾವತಿಸಬೇಕೆಂದು ತಿಳಿಸಿದ್ದ. ದೂರುದಾರ ವ್ಯಕ್ತಿ ಅ.7ರಂದು 97,000 ರೂ. ಹಾಗೂ ಅ.8ರಂದು 1.60 ಲಕ್ಷ ರೂ.ಗಳನ್ನು ನೆಫ್ಟ್ ಮೂಲಕ ಮೋಸಗಾರನ ಎಸ್‌ಬಿಐ ಖಾತೆ ಸಂಖ್ಯೆ 40417352907ಗೆ ಪಾವತಿಸಿದ್ದಾರೆ. ಹೀಗೆ ಒಟ್ಟು 2.92 ಲಕ್ಷ ರೂ.ಗಳನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು ಯಾವುದೇ ಗಿಫ್ಟ್ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ನಾಳೆಯಿಂದ ಅಜಿಲಮೊಗರು ಮಾಲಿದಾ ಉರೂಸ್

 

error: Content is protected !!
Scroll to Top