(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಮಂಗಳವಾರ 1058 ಮಂದಿಯಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿದೆ. 4,964 ಸಕ್ರಿಯ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.
ಹಲವು ತಿಂಗಳ ಬಳಿಕ ಕೊರೋನಾ ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿದಾಟಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ಡಿ. 18ರಂದು ಪಾಸಿಟಿವಿಟಿ ದರ 0.26ರಷ್ಟು ಇದ್ದರೆ, ಜ. 18ರಂದು 10.76 ಕ್ಕೆ ಏರಿಕಾಯಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ದ.ಕ ಐದನೇ ಸ್ಥಾನದಲ್ಲಿದೆ. ಬೆಂಗಳೂರು 1,78,328 ಪ್ರಕರಣ, ಮೈಸೂರು 8,401 ಪ್ರಕರಣ, ತುಮಕೂರು 7,958 ಪ್ರಕರಣ ಹಾಗೂ ಹಾಸನ ಜಿಲ್ಲೆಯಲ್ಲಿ 6,806 ಪ್ರಕರಣ ಸಕ್ರಿಯವಾಗಿದೆ.
Also Read ಮಂಗಳೂರು: ಮೀನು ಸಾಗಾಟದ ಸೋಗಿನಲ್ಲಿ ಅಕ್ರಮ ದನದ ಮಾಂಸ ಸಾಗಾಟಕ್ಕೆ ಯತ್ನ ➤ ಓರ್ವ ಅರೆಸ್ಟ್, ಉಳಿದವರಿಗೆ ಶೋಧ