ಕಡಬ: ಅಶಕ್ತ ಗೋವುಗಳನ್ನು ಗೋಶಾಲೆಗೆ ರವಾನಿಸಿದ ವಿಹಿಂಪ ಕಡಬ ಪ್ರಖಂಡ

(ನ್ಯೂಸ್ ಕಡಬ) newskadaba.com ಕಡಬ, ಜ. 17. ತಾಲೂಕಿನ ವಿವಿಧ ಭಾಗದ ಸುಮಾರು 80ರಷ್ಟು ಅಶಕ್ತ ಗೋವುಗಳನ್ನು ಕಡಬ ಪ್ರಖಂಡ ವಿಹಿಂಪ ವತಿಯಿಂದ ಮೈಸೂರಿನ ಪಿಂಜರಪೂಲೆ ಗೋಶಾಲೆಗೆ ರವಾನಿಸಲಾಯಿತು.

ಕಡಬದ ಸರಸ್ವತಿ ವಿದ್ಯಾಸಂಸ್ಥೆಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಜಾನುವಾರುಗಳ ಪರೀಕ್ಷೆಯನ್ನು ನಡೆಸಿದರು. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದ ಸಾಪ್ತಾಹಿಕ ಪ್ರಮುಖ್ ತಿಲಕ್ ರೈ ಕಡಬ, ರಘುರಾಮ್ ನಾಯಕ್ ಕಡಬ ಮೊದಲಾದವರು ಉಪಸ್ಥಿತರಿದ್ದರು.

Also Read  ಸವಣೂರು: ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟನೆ

 

 

error: Content is protected !!
Scroll to Top