ನೆಲ್ಯಾಡಿ: ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯ ಕೊಲೆ ಪ್ರಕರಣ ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 14. ಎಲ್ಐಸಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಾಂತಪ್ಪ ಗೌಡ ಎಂಬವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜಯಚಂದ್ರ ಎಂದು ಗುರುತಿಸಲಾಗಿದೆ. ಗುರುವಾರದಂದು ಬೆಳಗ್ಗೆ ಶಾಂತಪ್ಪ ಗೌಡರು ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಆರೋಪಿ ಜಯಚಂದ್ರ ಕೆಲಸದಾಳುಗಳೊಂದಿಗೆ ರಸ್ತೆಬದಿ ಪೊದೆಗಳನ್ನು ಕಡಿಯುತ್ತಿದ್ದ ಸಂದರ್ಭ ಏಕೆ ಪೊದೆಯನ್ನು ಕಡಿಯುವುದಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಜಯಚಂದ್ರ ಅವಾಚ್ಯ ಶಬ್ದಗಳಿಂದ ಶಾಂತಪ್ಪ ಅವರನ್ನು ಬೈದು ನಿಂದಿಸಿದಲ್ಲದೇ ನೀನು ಯಾರು ಎಂದು ಕೇಳಿ ಕೈಯಲ್ಲಿದ್ದ ಕತ್ತಿಯಿಂದ ಎಡಬದಿಯ ಕೆನ್ನೆಗೆ ಹಾಗೂ ಕುತ್ತಿಗೆಯ ಹಿಂಬಾಗಕ್ಕೆ ಕಡಿದಿದ್ದು, ಇದರಿಂದ ಗಂಭೀರ ಗಾಯಗೊಂಡ ಸಾಂತಪ್ಪರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಇವರಿಬ್ಬರ ನಡುವೆ ಆಸ್ತಿ ವಿಚಾರವಾಗಿ ಸುಮಾರು ವರ್ಷಗಳಿಂದ ತಕರಾರು ನಡೆಯುತ್ತಿದ್ದು, ಇದೇ ವಿಚಾರಕ್ಕಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಇದೀಗ ಮತ್ತಷ್ಟು ಹೊಸತನದೊಂದಿಗೆ "ಟಿವಿಎಸ್ ಜುಪಿಟರ್"; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ

error: Content is protected !!
Scroll to Top