ಕಡಬ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ಕಾನ್ಸ್‌ಟೇಬಲ್ ಶಿವರಾಜ್ ಜಾಮೀನು ಅರ್ಜಿ ತಿರಸ್ಕೃತ

(ನ್ಯೂಸ್ ಕಡಬ) newskadaba.com ಕಡಬ, ಜ. 14. ಸಂತ್ರಸ್ತ ಬಾಲಕಿಗೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿಸಿದ ಬಳಿಕ ಗರ್ಭಪಾತ ಮಾಡಿಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಡಬ ಠಾಣಾ ಕಾನ್ಸ್‌ಟೇಬಲ್ ಶಿವರಾಜ್ ಅವರ ಜಾಮೀನು ಅರ್ಜಿಯನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ.


ಕಡಬ ತಾಲೂಕಿನ ಗ್ರಾಮವೊಂದರ ಬಾಲಕಿಯನ್ನು ಲೈಂಗಿಕವಾಗಿ ಬಳಸಿ ಆಕೆ ಗರ್ಭವತಿಯಾದಾಗ ಗರ್ಭಪಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶಿವರಾಜ್ ನನ್ನು ಕಳೆದ ಸೆ. 28ರಂದು ಬಂಧಿಸಲಾಗಿತ್ತು. ಇದೀಗ ಬಂಧನವಾಗಿ ನೂರು ದಿನಗಳು ಕಳೆದಿದ್ದು, ಪ್ರಕರಣದ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆ ಆರೋಪಿ ಪರ ವಕೀಲರು ಈತನಿಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಈಗ ತಿರಸ್ಕೃತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ಜಿಲ್ಲೆಯ ಪೊಲೀಸರ ವರ್ಗಾವಣೆ ಪಟ್ಟಿ ರೆಡಿ.... ► ಹೊರ ಜಿಲ್ಲೆಗಳ ಪೊಲೀಸರು ಬರಲಿದ್ದಾರಾ ಮಂಗಳೂರಿಗೆ...?

error: Content is protected !!
Scroll to Top