ಭೀಕರ ರಸ್ತೆ ಅಪಘಾತ ➤ “ನನ್ನಮ್ಮ ಸೂಪರ್ ಸ್ಟಾರ್” ಸ್ಪರ್ಧಿ ಸಮನ್ವಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 14. ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್ ಇದರ ಸ್ಪರ್ಧಿ, 6 ವರ್ಷದ ಬಾಲಕಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

 

ಮೃತ ಸ್ಪರ್ಧಿಯನ್ನು ಸಮನ್ವಿ ಎಂದು ಗುರುತಿಸಲಾಗಿದೆ. ಈಕೆ ತಾಯಿ ಅಮೃತಾ ನಾಯ್ಡು ಅವರು ಗಂಭೀರ ಗಾಯಗೊಂಡಿದ್ದಾರೆ. ಮೃತ ಬಾಲಕಿ ಸಮನ್ವಿ ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕುಮಾರಸ್ವಾಮಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ರಸ್ತೆ ಅಪಘಾತ- 5ಮಂದಿಗೆ ಗಂಭೀರ ಗಾಯ..!

 

 

error: Content is protected !!
Scroll to Top