ಕಛೇರಿಯ ಬಾಡಿಗೆ ಹಣ ನೀಡದೆ ವಂಚಿಸಿ ಕಟ್ಟಡ ಮಾಲಕರಿಗೆ ಬೆದರಿಕೆ ಒಡ್ಡಿದ ಆರೋಪ ➤ ಕಡಬದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಜ.11. ಬಾಡಿಗೆಗೆ ನೀಡಿದ ಕೋಣೆಯನ್ನು ಖಾಲಿ ಮಾಡಿ ಬಳಿಕ ಕೋಣೆಯಲ್ಲಿದ್ದ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್, ಹಾಗೂ ವಯರ್ ಮತ್ತು ಗೋಡೆಗಳಿಗೆ ಹಾನಿಯನ್ನುಂಟು ಮಾಡಿ ಕಟ್ಟಡ ಮಾಲಿಕರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಡಬ ಠಾಣೆಯಲ್ಲಿ ವ್ಯಕ್ತಿಯ ವಿರುದ್ದ ಎಫ್.ಐ ಆರ್ ದಾಖಲಾಗಿದೆ.

ಕಡಬ ಪೇಟೆಯ ಜೆ.ಪಿ ಕಾಂಪ್ಲೇಕ್ಸ್ ಮಾಲಕ ವಿದ್ಯುತ್ ಗುತ್ತಿದಾರರಾಗಿರುವ ಜೋಸ್ ಪ್ರಕಾಶ್ ಎಂಬವರು ದೂರು ನೀಡಿದ್ದು, ತಮ್ಮ ಕಟ್ಟಡದಲ್ಲಿ ಬಾಡಿಗೆ ಕೋಣೆ ಪಡೆದಿದ್ದ ಅನೀಶ್ ಎಂಬವರ ವಿರುದ್ದ ಕೇಸು ದಾಖಲಿಸಿದ್ದಾರೆ.

ಕಟ್ಟಡ ಮಾಲಿಕರು ಎರಡನೇ ಮಹಡಿಯಲ್ಲಿರುವ ರೂ.ನಂ:13 ಸಂಖ್ಯೆಯ ಕೋಣೆಯನ್ನು ಅನೀಶ್ ಎಂಬಾತನಿಗೆ ಬಾಡಿಗೆಗಾಗಿ ದಿನಾಂಕ :22.10.2020 ರಂದು ಕರಾರು ಮುಖೇನಾ ತಿಂಗಳಿಗೆ 8000 ಬಾಡಿಗೆಯಂತೆ ನಿಗದಿ ಮಾಡಿ ಬಾಡಿಗೆ ಕೋಣೆಯನ್ನು ನೀಡಿದ್ದರು.ಆದರೆ 2021ನೇ ಜುಲೈ ತಿಂಗಳಿನಿಂದ ಬಾಡಿಗೆಯನ್ನು ನೀಡದೇ ಕೋಣೆಯನ್ನು ಖಾಲಿ ಮಾಡದೇ ಇದ್ದ ಕಾರಣ ಕೋಣೆಯನ್ನು ಕರಾರಿನಂತೆ ಬಿಡುವಂತೆ ಕೇಳಿಕೊಂಡಿದ್ದರು.ಆದರೆ ಕೋಣೆಯನ್ನು ಖಾಲಿ ಮಾಡುವುದಿಲ್ಲ ಎಂದು ಹೇಳಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದಿನಾಂಕ:10-01-2022 ರಂದು ರಾತ್ರಿ 02:15 ಗಂಟೆಗೆ ಏಕಾಏಕಿ ಆರೋಪಿತನು ಬಾಡಿಗೆ ಕೋಣೆಯನ್ನು ಖಾಲಿ ಮಾಡಿ ಕೋಣೆಯ ಗೋಡೆಗೆ ಅಳವಡಿಸಿದ್ದ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್, ಹಾಗೂ ವಯರ್ ಮತ್ತು ಗೋಡೆಗಳಿಗೆ ಹಾನಿಯನ್ನುಂಟು ಮಾಡಿ ಕೋಣೆಯನ್ನು ಖಾಲಿ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಸುಮಾರು 10ಗಂಟೆಗೆ ಕಟ್ಟಡ ಮಾಲಕ ಆರೋಪಿತನಿಗೆ ಕರೆ ಮಾಡಿದಾಗ ಬಾಡಿಗೆ ಕೋಣೆ ಖಾಲಿ ಮಾಡಿರುವುದಾಗಿ ತಿಳಿಸಿದ್ದು ನಂತರ ಬಾಡಿಗೆ ಕೋಣೆಯ ಸ್ವಿಚ್ ಬೋರ್ಡ್ ಮತ್ತು ಪೈಂಟಿಗ್ ಹಾಗೂ ಗೋಡೆಯನ್ನು ಈ ಮೊದಲು ಇದ್ದ ಹಾಗೆ ಮಾಡಿಕೊಡಬೇಕೆಂದು ಹೇಳಿದ್ದರು.ಈ ವೇಳೆ ಕಟ್ಟಡ ಮಾಲಕರಿಗೆ ಅವಾಚ್ಯವಾಗಿ ನಿಂದಿಸಿ ಇಲ್ಲಿ ವಾಸಮಾಡಲು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ ಹಾಗೂ ನಾನು ಮಾದ್ಯಮ ಪ್ರತಿನಿಧಿ, ನಿಮ್ಮನ್ನು ಮಾದ್ಯಮದಲ್ಲಿ ಸುಳ್ಳು ನ್ಯೂಸ್ ಮಾಡಿ ಮಾನ ಹಾನಿ ಮಾಡುತ್ತೇನೆಂದು ಹೇಳಿ ಬೆದರಿಕೆ ಹಾಕಿರುವುದಾಗಿ ಕಟ್ಟಡ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲು ಬಂದ ವೇಳೆ ಅನಿಶ್ ಅವರು ದೂರುದಾರರನ್ನು ತಡೆದು ನಿಲ್ಲಿಸಿ ಪುನ:ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೋಣೆಯ ಎಲೆಕ್ಟ್ರಾನಿಕ್ ಸ್ವೀಚ್ ಬೋಡ್ಸ್ ಹಾಗೂ ಗೋಡೆಯ ಬಣ್ಣ ಹಾಗೂ ಕೊಣೆಯ ಶಟರ್ಗಳನ್ನು ಹಾಳು ಮಾಡಿ ಸುಮಾರು 50,000-ನಷ್ಠ ಉಂಟು ಆಗಿರುತ್ತದೆ ಎಂದು ಎಪ್.ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ಕಡಬ ಠಾಣಾ ಅ .ಕ್ರ .ನಂಬ್ರ: 03/2022 ಕಲಂ; 506,504,427,341 ಐಪಿಸಿ ತಂತೆ ಕೇಸು ದಾಖಲಾಗಿದೆ.

Also Read  ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಲು ರಾಜ್ಯ ಸರಕಾರದಿಂದ ಕಟ್ಟುನಿಟ್ಟಿನ ಕ್ರಮ ಜಾರಿ

 

 

error: Content is protected !!
Scroll to Top