ಮಂಗಳೂರು: ಆರ್ಥಿಕ‌ ಅಡಚಣೆ ಹಾಗೂ ಸಾಲಬಾಧೆ ಹಿನ್ನೆಲೆ ➤ ಆತ್ಮಹತ್ಯೆಗೆ ಶರಣಾದ ಯುವಕ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 10. ಸಾಲದಿಂದ ಬೇಸತ್ತ ಯುವಕನೋರ್ವ ತಾನು ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಸೋಮವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ಸುಶಾಂತ್ ಎಂದು ಗುರುತಿಸಲಾಗಿದೆ. ಸುರತ್ಕಲ್ ಕುಳಾಯಿಯ ಸನ್ ರೈಸ್ ಕಾರ್ಪೊರೇಷನ್ ಎಂಬ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಸುಸೈಡ್ ನೋಟ್ ಬರೆದಿಟ್ಟು ಕಛೇರಿಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತಂದೆತಾಯಿ ಹದಿನೈದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅಣ್ಣನ ಜೊತೆ ವಾಸವಾಗಿದ್ದ ಈತ ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಆರ್ಥಿಕ ಅಡಚಣೆ ಹಾಗೂ ಸಾಲಬಾಧೆ ಎಂದು ಬರೆದಿಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Scroll to Top