ಅತಿಯಾಗಿ ಟಿವಿ ನೋಡಬೇಡ ಎಂದು ಬುದ್ದಿ ಹೇಳಿದ ತಂದೆ ➤ ಆಕ್ರೋಶಗೊಂಡ ಮಗ ಆತ್ಮಹತ್ಯೆ…!



(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 10. ಅತಿಯಾಗಿ ಟಿವಿ ನೋಡಬೇಡ ಎಂದು ಪೋಷಕರು ಬುದ್ದಿ ಹೇಳಿದಕ್ಕೆ ಯುವಕನೊಕರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಜೆ ನಗರದಲ್ಲಿ ನಡೆದಿದೆ.








ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸೈಯದ್ ಸಾಹಿಲ್ (23) ಎಂದು ಗುರುತಿಸಲಾಗಿದೆ. ಈತ ಯಾವಾಗಲೂ ಮನೆಯಲ್ಲೇ ಇರುತ್ತಿದ್ದು, ಯಾವುದೇ ಕೆಲಸಕ್ಕೂ ಹೋಗದೇ ಟಿವಿ ‌ನೋಡುತ್ತಾ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ಯಾವಾಗಲೂ ಟಿವಿ ನೋಡ್ತಾ ಇರ್ತೀಯಾ, ಕೆಲಸಕ್ಕೆ ಹೋಗುವುದಿಲ್ವಾ ಎಂದು ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಾಹಿಲ್, ಟಿವಿ ರಿಮೋಟ್ ಎಸೆದು ಅಡುಗೆ ಮನೆಗೆ ತೆರಳಿ ಚಾಕುವಿನಿಂದ ತನ್ನನ್ನು ತಾನೆ ಇರಿದುಕೊಂಡಿದ್ದಾನೆ ಎನ್ನಲಾಗಿದೆ. ತಕ್ಷಣವೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.






 

error: Content is protected !!
Scroll to Top