ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಹಿನ್ನೆಲೆ ➤ ಕೋವಿಡ್ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋ ಡಿಲೀಟ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 10. ವಿಧಾನಸಭಾ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ನೀಡಲಿರುವ ಕೊರೋನಾ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಭಾರತದ ಚುನಾವಣಾ ಆಯೋಗದ ಘೋಷಣೆಯ ಬಳಿಕ ಉ.ಪ್ರ ಹಾಗೂ ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆ ಪ್ರಧಾನಿಯವರ ಹೆಸರು ಹಾಗೂ ಭಾವಚಿತ್ರವನ್ನು ಲಸಿಕಾ ಪ್ರಮಾಣಪತ್ರದಿಂದ ಹೊರಗಿಡಲು ಶನಿವಾರ ರಾತ್ರಿಯೇ ಅಗತ್ಯ ಫಿಲ್ಟರ್ ಗಳನ್ನು ಅನ್ವಯಿಸಲಾಗಿದೆ ಎಂದು ವರದಿ ತಿಳಿಸಿದೆ.

Also Read  ➤ಆಸ್ತಿಗಾಗಿ ತಂದೆಯನ್ನು ಕೊಂದ ಪಾಪಿ ಮಗ

error: Content is protected !!
Scroll to Top