ಬಂಟ್ವಾಳ: ಕಲ್ಲಿನ ಕೋರೆಯಲ್ಲಿ ಸ್ಫೋಟಕ ಬಳಕೆ- ಸಾರ್ವಜನಿಕರಿಂದ ದೂರು ➤ ತಹಶೀಲ್ದಾರ್ ದಾಳಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 06. ಸಾರ್ವಜನಿಕರಿಂದ ಕೇಳಿಬಂದ ದೂರಿನನ್ವಯ ಕಲ್ಲಿನ ಕೋರೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ಉಪಕರಣಗಳನ್ನು ಉಪಯೋಗಿಸಿ ಕಪ್ಪು ಕಲ್ಲು ಸ್ಪೋಟ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ನೇತೃತ್ವದ ತಂಡ ದಾಳಿ ನಡೆಸಿ ಸ್ಫೋಟಕ್ಕೆ ಬಳಸಿದ ಉಪಕರಣ ಹಾಗೂ ಸ್ಥಳದಲ್ಲಿದ್ದ ಹಿಟಾಚಿಯೊಂದನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಕಾವಳಪಡೂರು ಎಂಬಲ್ಲಿ ಗುರುವಾರದಂದು ಮುಂಜಾನೆ ನಡೆದಿದೆ.

ಈ ಸಂದರ್ಭ ಕೋರೆಯ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ದಾಳಿಯ ಸಂದರ್ಭ ಕಂದಾಯ ನಿರೀಕ್ಷಕ ಕುಮಾರ್, ಗ್ರಾಮಕರಣಿಕೆ ಆಶಾ ಮೆಹಂದಲೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Also Read  ಕರಾವಳಿ ಮುಂದುವರಿದ ಮುಷ್ಕರ ➤ ಬಿಗಡಾಯಿಸಿದ ಕಸದ ಸಮಸ್ಯೆ

error: Content is protected !!
Scroll to Top