ಉಪ್ಪಿನಂಗಡಿಯಿಂದ ಕಳವಾದ ದ್ವಿಚಕ್ರ ವಾಹನ ಶನಿವಾರಸಂತೆಯಲ್ಲಿ ಪತ್ತೆ ➤ ಮಾಲಕ ದೇವರ ಮೊರೆಹೋಗಿ ಹೊರಬರುತ್ತಲೇ ನಡೆಯಿತು ಪವಾಡ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 20. ಕಳವಾಗಿದ್ದ ದ್ವಿಚಕ್ರ ವಾಹನವೊಂದು ಇದೀಗ ಶನಿವಾರಸಂತೆಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.

ಉದ್ಯಮಿ ಸುಂದರ ಗೌಡ ಎಂಬವರು ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈಯಲಾಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದರೂ ಕಳ್ಳನ ಮುಖದ ಗುರುತು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದರೂ ಹಲವು ದಿನಗಳ ಕಾಲ ವಾಹನ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆ ಪ್ರಸಿದ್ದ ಕಾರಣೀಕ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿ ವಾಹನವನ್ನು ಮರಳಿ ದೊರಕಿಸಿ ಕೊಡುವಂತೆ ದೇವರ ಮೊರೆಹೋಗಿದ್ದ ಇವರಿಗೆ ದೇವಸ್ಥಾನದಿಂದ ಹೊರಬರುತ್ತಲೇ ದೂರವಾಣಿ ಕರೆ ಬಂದಿದ್ದು, ಅದರಲ್ಲಿ ಸುಂದರಗೌಡರ ದ್ವಿಚಕ್ರ ವಾಹನವು ಶನಿವಾರಸಂತೆಯಲ್ಲಿ ಅನಾಥವಾಗಿ ಬಿದ್ದಿರುವ ಕುರಿತು ಮಾಹಿತಿ ನೀಡಿದ್ದಾರೆ.

Also Read  ಇಂದಿನ ಕೊರೋನಾ ಅಪ್ಡೇಟ್ ➤ ಕಡಬ ವ್ಯಾಪ್ತಿಯಲ್ಲಿ 42 ಮಂದಿಗೆ ಕೊರೋನಾ ಪಾಸಿಟಿವ್


ವಾಹನವನ್ನು ಕದ್ದೊಯ್ದ ಕಳ್ಳನು ಶನಿವಾರಸಂತೆಗೆ ಕೊಂಡುಹೋಗಿದ್ದು ಉಪಯೋಗಿಸುತ್ತಿದ್ದ ವೇಳೆ ವಾಹನ ಅಪಘಾತಕ್ಕೊಳಗಾಗಿ ಚಲಿಸಲಾಗದ ಸ್ಥಿತಿಗೆ ಬಂದು ತಲುಪಿದ್ದು, ಹೀಗಾಗಿ ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದನು. ಈ ಅನಾಥ ಸ್ಥಿತಿಯಲ್ಲಿ ಬಿದ್ದರುವ ವಾಹನವನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಾಹನದ ರಿಜಿಸ್ಟರ್ ನಂಬರ್ ಪರಿಶೀಲಿಸಿದ ಪೊಲೀಸರು ಸುಂದರ ಗೌಡರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಪಿಕಪ್ ವಾಹನದ ಮೂಲಕದ ಉಪ್ಪಿನಂಗಡಿಗೆ ತರಲಾಗಿದೆ.

error: Content is protected !!
Scroll to Top