ಮಂಗಳೂರು: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆ ಅರೆಸ್ಟ್ ➤ 36.43 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಅವರಿಂದ ಸುಮಾರು 36,43,270 ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಆರೋಪಿ ಮಹಿಳೆಯು ಕಾಸರಗೋಡು ಮೂಲದ ತಲಂಗೆರೆಯವರಾಗಿದ್ದು, ಇವರು ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಗುರುವಾರದಂದು ಬಂದಿಳಿದಿದ್ದು, ಈ ಸಂದರ್ಭ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ 24 ಕ್ಯಾರೆಟ್ ನ 739 ಗ್ರಾಂ. ಚಿನ್ನವನ್ನು ಗಮ್ ರೂಪದಲ್ಲಿ ಮಾಡಿ ಪ್ಲಾಸ್ಟಿಕ್ ಪೌಚ್ ಗೆ ತುಂಬಿಸಿ ಒಳ ಉಡುಪಿನ ಒಳಗೆ ಹೊಲಿದು ಜೋಡಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Also Read  ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!!

error: Content is protected !!
Scroll to Top