ಕೋಡಿಂಬಾಳ: ನಾದಿನಿಗೆ ಆಸಿಡ್‌ ಎರಚಿದ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಕೋಡಿಂಬಾಳ ಅ.11: ಕಳೆದ ಜನವರಿ ತಿಂಗಳಿನಲ್ಲಿ ಕೋಡಿಂಬಾಳದಲ್ಲಿ ಆಸಿಡ್‌ ಎರಚಿದ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

 

 

ತನ್ನ ತಮ್ಮನ ಪತ್ನಿ ಸಪ್ನ ಎಂಬವರಿಗೆ ಆಸಿಡ್‌ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಜಯಾನಂದ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಜಯಾನಂದ ಇದುವರೆಗೂ ನ್ಯಾಯಂಗ ಬಂಧನದಲ್ಲಿಯೇ ಇದ್ದರು. ಇದೀಗ ನಾದಿನಿಗೆ ಆಸಿಡ್‌ ಎರಚಿ ಕೊಲೆಗೆ ಯತ್ನಿಸಿದ ಆರೋಪಿಗೆ ,ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಲಯವು ನ್ಯಾಯಾಧೀಶ ರುಡಾಲ್ಫ್‌ ಪಿರೇರಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ನ್ಯಾಯವಾದಿ ಮಹೇಶ್‌ ಕಜೆ ವಾದಿಸಿದ್ದರು.

 

Scroll to Top