ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 1256 ಜನರ ಮೇಲಿನ ರೌಡಿ ಶೀಟ್ ರದ್ದು..! ➤ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿ- ಕಮಿಷನರ್ ಶಶಿಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ ಒಟ್ಟು 3,263 ರೌಡಿ ಶೀಟರ್ ಗಳ ಪೈಕಿ ಒಟ್ಟು 1,256 ವ್ಯಕ್ತಿಗಳ ರೌಡಿಶೀಟ್ ಗಳನ್ನು ಇಂದು ತೆಗೆದು ಹಾಕಲಾಗಿದ್ದು, ಇದರ ಪೈಕಿ 80 ಮಂದಿ ವಯಸ್ಸಾದವರು, 663 ನ್ಯಾಯಾಲಯದಲ್ಲಿ ಪ್ರಕರಣ ಮುಕ್ತಾಯವಾದ ರೌಡಿಗಳು ಹಾಗೂ 513 ಮಂದಿ ಚಟುವಟಿಕೆಯಲ್ಲಿ ಇಲ್ಲದೇ ಇರುವವರು ಎಂದು ಪೊಲೀಸರ ತಿಳಿಸಿದ್ದಾರೆ.

ಹಬ್ಬಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ರೌಡಿ ಶೀಟ್ ಹೋದಿರುವ ವ್ಯಕ್ತಿಗಳು ಪೊಲೀಸ್ ಠಾಣೆಗೆ ಹಾಜರಾತಿ ನೀಡಬೇಕಾದ ಸಂದರ್ಭಗಳಿದ್ದು, ಇದನ್ನು ಮನಗಂಡ ಆಯುಕ್ತರಾದ ಎನ್.ಶಶಿಕುಮಾರ್ ಅವರು ಎಲ್ಲಾ ಪೊಲೀಸ್ ನಿರೀಕ್ಷಕರು, ಎಸಿಪಿ ಹಾಗೂ ಡಿಸಿಪಿ ರವರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಂಡು, ಇಂದು ಮಂಗಳೂರಿನ ಶ್ರೀ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ಪರಿವರ್ತನಾ ಸಭೆಯನ್ನು ಏರ್ಪಡಿಸಲಾಗಿತ್ತು.

Also Read  ಗಣೇಶ ಚತುರ್ಥಿ- ಪೊಲೀಸರಿಂದ ಪಥ ಸಂಚಲನ

error: Content is protected !!
Scroll to Top