ಮಂಗಳೂರು: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ➤ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 14. ಗಾಂಜಾ ಮಾರಾಟಕ್ಕೆಂದು ಒಯ್ಯುತ್ತಿದ್ದ ಕೇರಳ ಮೂಲದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.







ಬಂಧಿತ ವಿದ್ಯಾರ್ಥಿಗಳನ್ನು ಯೆನೆಪೋಯಾ ಡೆಂಟಲ್ ಕಾಲೇಜಿನ ವಿದ್ಯಾರ್ಥಿ ತ್ರಿಶೂರ್ ನಿವಾಸಿ ಆದರ್ಶ್ ಜ್ಯೋತಿ (22) ಹಾಗೂ ನಿಟ್ಟೆ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿ ಕೊಟ್ಟಾಯಂ ನಿವಾಸಿ ಯೋಯಲ್ ಜೋಯ್ಸ್ (22) ಎಂದು ಗುರುತಿಸಲಾಗಿದೆ. ಇವರು ಉಳ್ಳಾಲದ ಕುಂಪಲದ ಬಳಿಯ ಬಗಂಬಿಲ ಎಂಬಲ್ಲಿ ಸ್ಕೂಟರಿನಲ್ಲಿ ಸಾಗುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದ್ದು, 220 ಗ್ರಾಮ್ ಗಾಂಜಾ ಜೊತೆಗೆ ಆರೋಪಿಗಳನ್ನು ಬಂಧಿಸಿ, ಎನ್ ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.






 

 

 

error: Content is protected !!
Scroll to Top